ಬಿ.ಇ.ಎಂ. ವಿದ್ಯಾ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಬಿ.ಇ.ಎಂ. ಹೈಸ್ಕೂಲ್ ಹಳೇ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ 70ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ನಡೆಯಿತು.
ಶ್ರೀಯುತ ರವೀಂದ್ರ ಕಿಣಿ ಮಾಲಕರು ದುರ್ಗಾ ಲೆಬೊರೇಟರಿ ಮಂಗಳೂರು ಇವರು ಧ್ವಜಾರೋಹಣ ಮಾಡಿದರು. ಸಭಾ ಕಾರ್ಯಕ್ರಮವು ಆಡಳಿತ ಮಂಡಳಿಯ ಮಾಜಿ ಸಂಚಾಲಕರಾದ ಶ್ರೀಯುತ ಆಲ್ವಿನ್ ಕೊಲೊಸೊರವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಖ್ಯ ಅತಿಥಿಗಳಾಗಿ ಗಣಪತಿ ದೇವದಾಸ್ ಪೈ ಎಂಡ್ ಕಂ. ಯ ಮಾಲಕರಾದ ಶ್ರೀಯುತ ವೆಂಕಟೇಶ ಪೈ, ನಿವೃತ್ತ ಪೋಲಿಸ್ ಆಧಿಕಾರಿ ಹಾಗೂ ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಎಂ. ಗಣೇಶ್, ಬಿ.ಇ.ಎಂ. ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜನಾಬ್ ಎ.ಎಂ. ರಫೀಯುದ್ದೀನ್, ಆಡಳಿತ ಮಂಡಳಿಯ ಖಜಾಂಜಿ ಶ್ರೀಯುತ ಆಲ್ವಿನ್ ಮನೋಹರ್ ಆನಂದ್, ಹಿರಿಯ ನ್ಯಾಯವಾದಿ ಶ್ರೀಯುತ ವಿಠಲ್ ಕುಡ್ವ, ಪ. ಪೂ. ಕಾಲೇಜಿನ ಪ್ರಾಂಶುಪಾಲ ಶ್ರೀಯುತ ರೋಶನ್ ಕುಮಾರ್, ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಶ್ರೀಮತಿ ಫ್ರೀಡಾ ಮಾಬೆನ್ ಉಪಸ್ಥಿತರಿದ್ದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕ ಶ್ರೀಯುತ ಶಂಕರ್ ಕೆ.ಸಿ. ಸ್ವಾಗತಿಸಿದರು. ಶಿಕ್ಷಕಿ ಶ್ರೀಮತಿ ಶಿಲ್ಪ ಶ್ರೀ ಕಾರ್ಯಕ್ರಮ ನಿರೂಪಿಸಿ, ಚಿತ್ರಕಲಾ ಶಿಕ್ಷಕ ಮಾಧವ ಎ. ವಂದಿಸಿದರು.
[fancygallery id=”2″ album=”25″]
No Comment
You can post first response comment.