ಬಿ.ಇ.ಎಂ ಅನುದಾನಿತ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವು ದಿನಾಂಕ 02-06-2018ನೇ ಸೋಮವಾರ ಸಂಭ್ರಮದಿಂದ ಜರಗಿತು. ಶಾಲಾ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕ ಅಧ್ಯಾಪಕೇತರ ವೃಂದ ಶಾಲಾ ಆಡಳಿತ ಮಂಡಳಿ ಸದಸ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಭಾ ಸಮಾರಂಭದಲ್ಲಿ ಆಡಳಿತಮಂಡಳಿ ಕೋಶಾಧಿಕಾರಿ ಶ್ರೀ ಆಲ್ವಿನ್ ಮನೋಹರ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಜನಾಬ್ ಎ. ಎಂ. ರಫಿಯುದ್ದೀನ್, ಪ್ರೌಢ ಶಾಲಾ ಉಸ್ತುವಾರಿ ಸದಸ್ಯ ರೊನಾಲ್ಡ್ ಕರ್ಕಡ, ಶಾಲಾ ವ್ಯವಸ್ಥಾಪಕ ನೆಲ್ಸನ್ ರೋಚ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಂಕರ್ ಕೆ.ಸಿ. ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಶಿಲ್ಪಶ್ರೀ. ನಿರೂಪಿಸಿ ವಂದಿಸಿದರು. ಶಾಲಾ ವಿದ್ಯಾರ್ಥಿಗಳ ಕ್ಷೇಮಾಭಿವೃಧ್ಧಿ ಅಧಿಕಾರಿ ಶ್ರೀ ಯಶವಂತ ಮಾಡ ಪ್ರಾಸ್ತಾವಿಕ ಮಾತನಾಡಿದರು.
[fancygallery id=”2″ album=”56″]
No Comment
You can post first response comment.