ಬಿ.ಇ.ಎಂ. ಪ್ರೌಢ ಶಾಲೆಯಲ್ಲಿ ಪರಿಸರ ದಿನಾಚರಣೆ

ಬಿ.ಇ.ಎಂ ಪ್ರೌಢಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಗಿಡಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಶಾಲಾ ವಿದ್ಯಾರ್ಥಿಗಳು, ಶಾಲಾ ಅಧ್ಯಾಪಕ ಅಧ್ಯಾಪಕೇತರ ವೃಂದ ಶಾಲಾ ಆಡಳಿತ ಮಂಡಳಿ ಸದಸ್ಯರು, ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಆ ಬಳಿಕ ನಡೆದ ಸಭಾ ಸಮಾರಂಭದಲ್ಲಿ ಆಡಳಿತಮಂಡಳಿ ಕೋಶಾಧಿಕಾರಿ ಶ್ರೀ ಆಲ್ವಿನ್ ಮನೋಹರ್ ಆನಂದ್ ಅಧ್ಯಕ್ಷತೆ ವಹಿಸಿದ್ದರು. ವೀರ ವೆಂಕಟೇಶ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಶ್ರೀ ಮಂಜುನಾಥ ಶೆಣೈ, ಶಾಲಾ ಆಡಳಿತ ಮಂಡಳಿಯ ಪ್ರೌಢ ಶಾಲಾ ಉಸ್ತುವಾರಿ ಸದಸ್ಯ ರೊನಾಲ್ಡ್ ಕರ್ಕಡ, ಶಾಲಾ ಹಳೆವಿದ್ಯಾರ್ಥಿ ಜಯರಾಜ್ ಪೈ, ಪ್ರಬಂಧಕ ಮಾಧವ ಆಚಾರ್ಯ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯ ಶ್ರೀ ಶಂಕರ್ ಕೆ.ಸಿ. ಸ್ವಾಗತಿಸಿ, ಶಿಕ್ಷಕಿ ಶ್ರೀಮತಿ ಸಂಧ್ಯಾ ಭಟ್ ನಿರೂಪಿಸಿ ಶಿಕ್ಷಕ ಶ್ರೀಯುತ ಯಶವಂತ ಮಾಡ ವಂದಿಸಿದರು. ವಿಜ್ಞಾನ ಶಿಕ್ಷಕಿ ಶ್ರೀಮತಿ ಅಂಬಿಳಿ ಸಿ.ಡಿ. ಪ್ರಾಸ್ತಾವಿಕ ಮಾತನಾಡಿದರು.

[fancygallery id=”2″ album=”53″]

No Comment

You can post first response comment.